
ಈ ಕೆಳಗಿನ ವಾಕ್ಯ ಸತ್ಯ
ಈ ಮೇಲಿನ ವಾಕ್ಯ ಸುಳ್ಳು.
ಮೇಲೆ ಬರೆದಿರುವ ಎರಡು ವಾಕ್ಯಗಳನ್ನು ನಿಧಾನವಾಗಿ ಪರಿಶೀಲಿಸಿ. ಇದನ್ನು 'ಎಪಿಮೆಂಡಿಸನ ವಿರೋಧಾಭಾಸ' ಎಂದು ಕರೆಯಲಾಗುತ್ತದೆ.

'ಸತ್ಯವೆಂದರೆ ನಮಗೆ ಗೊಚರಿಸುವ ಮೂರು ಆಯಾಮಗಳ ಜಾಗವಷ್ಟೇ. ನಾಲ್ಕು ಆಯಾಮಗಳ ಪರಿಕಲ್ಪನೆ ಎಷ್ಟುಕಾಲ್ಪನಿಕವೋ, ಎರಡು

ವಾಸ್ತವದಲ್ಲಿ ಕಾಣಸಿಗದ ನಿರಂತರತೆಯನ್ನು ಅವರು ಚಿತ್ರದಲ್ಲಿ ಹಿಡಿದಿಡಲು ಸಾಧ್ಯವಾಗಿದೆ. ಇದಕ್ಕೆ ಉದಾಹರಣೆಯಾಗಿ ಎರಡು ಜನಪ್ರಿಯ ಚಿತ್ರಗಳನ್ನು ಗಮನಿಸಬಹುದು.


ನಿರಂತರತೆಯ ಈ ಪರಿಕಲ್ಪನೆಯನ್ನೇ ಆಧಾರವಾಗಿಟ್ಟುಕೊಂಡ ಎಷರ್ ಅವರ ಮತ್ತೊಂದು ಚಿತ್ರ ಗಮನಿಸಿ. ಈ ಚಿತ್ರದ ಹೆಸರು Print Gallery (ಚಿತ್ರ ಸಂಗ್ರಹಾಲಯ, ಲಿಥೋಗ್ರಾಫ್, ೧೯೫೬) ಈ ಚಿತ್ರದಲ್ಲಿ ಒಬ್ಬ ವ್ಯಕ್ತಿ ನಿಂತು ಸಂಗ್ರಹಾಲಯದಲ್ಲಿರುವ ಒಂದು ಚಿತ್ರವನ್ನು ನೋಡುತ್ತಿದ್ದಾನೆ. ಅದರೊಳಗಿನ ಚಿತ್ರ ಬೆಳೆದು ಇಡೀ ನಗರವನ್ನು ಚಿತ್ರಿಸಿ ತೋರಿಸುತ್ತದೆ. ಚಿತ್ರದೊಳಗಿನ ನಗರದ ಒಂದು ಭಾಗವಾಗಿ ಮತ್ತೆ ಸಂಗ್ರಹಾಲಯ ಹಾಗೂ ಸಂಗ್ರಹಾಲಯದ ಒಳಗೆ ಮತ್ತದೇ ಚಿತ್ರ ನೋಡುತ್ತಿರುವ ವ್ಯಕ್ತಿ!

ಎಷರ್ ಶೈಲಿಯ ಚಿತ್ರಗಳು ಲ್ಯಾಟಿನ್ ಅಮೆರಿಕನ್ ಸಾಹಿತ್ಯದ ಪರಿಭಾಷೆಯಲ್ಲಿರುವ MagicRealismನ ಪರಿಕಲ್ಪನೆಗೆ ಬಹಳ ಹತ್ತಿರವಾದದ್ದು. ಇಲ್ಲಿ ಸತ್ಯ ಮತ್ತು ಮಿಥ್ಯೆಯ ಗೆರೆಯಾಚೀಚೆ ಎಲ್ಲವೂ ನಡೆಯುತ್ತಿರುತ್ತದೆ. Surrealismನಿಂದ ಬಿಡುಗಡೆಗೊಂಡು ಭಿನ್ನವಾಗಿ ನಿಂತಿರುವ Meta Realismಗೆ ಈ ಚಿತ್ರಗಳು ಸೇರಿಬಿಡುತ್ತವೆ.
ಲ್ಯಾಟಿನ್ ಅಮೆರಿಕನ್ ಸಾಹಿತ್ಯಕ್ಕೆ ಬಹಳ ಹತ್ತಿರವಾಗಿ ಪರಿಕಲ್ಪನೆ ಎಷರ್ ಚಿತ್ರಗಳಲ್ಲಿ ಇದೆ ಎಂದು ಹೇಳಿದಾಗ ಮನಸ್ಸಿನಲ್ಲಿ ಇದ್ದದ್ದು ಆರ್ಜೆಂಟೀನಾದ ಲೇಖಕ ಹಾರ್ಹೆ ಲುಯಿ ಬೊರೇಸ್ ಎಂಬ ಕಥೆಗಾರ. Print Gallery ಯಲ್ಲಿರುವ ಪರಿಕಲ್ಪನೆಯನ್ನು ನಾವು ಬೊರೇಸ್‌ರTlon Uqbar Orbis Tertius ಎಂಬ ಕಥೆಯಲ್ಲಿ ಕಾಣಬಹುದು. ಇಲ್ಲಿ ಬೊರೇಸ್‌ರ ಮಿತ್ರನ ಬಳಿಯಿರುವ ಒಂದು ವಿಶ್ವಕೋಶದಲ್ಲಿ Uqbar ಪ್ರದೇಶದ ವಿವರಣೆಯಿದೆ. ಈ ವಿವರಣೆಯಿರುವುದು ಆ ವಿಶ್ವಕೋಶದ ಆ ಒಂದು ಪ್ರತಿಯಲ್ಲಿ ಮಾತ್ರ. ಇತರ ಪ್ರತಿಗಳಲ್ಲಿ ಇಂಥ ವಿವರವೇ ಇಲ್ಲ! ಹೀಗೆ ಒಂದು ಪುಸ್ತಕದ ಒಂದು ಪ್ರತಿಯ ನಾಲ್ಕು ಪುಟಗಳಿಂದ Uqbar ಎಂಬ ಭೂಪ್ರದೇಶ ಉದ್ಭವಿಸಿ, ತನ್ನದೇ ಸಂಸ್ಕೃತಿ, ಇತಿಹಾಸ, ಜನಜೀವನವನ್ನು ಸೃಷ್ಟಿಮಾಡಿಕೊಂಡುಬಿಡುತ್ತದೆ. ಕಡೆಗೆ ಇಷ್ಟೆಲ್ಲಾ ಆದಮೇಲೂ Uqbar ಪ್ರದೇಶ ಅಂತ್ಯಗೊಳ್ಳುವುದು ಹುಟ್ಟಿದ ಜಾಗದಲ್ಲೇ - ಎರಡೇ ಆಯಾಮಗಳಿರುವ ಕಾಗದದ ಮೇಲೆ! ಇದರ ಪರಿಕಲ್ಪನೆ ವಾಸ್ತವದ ಅಡಿಪಾಯದಿಂದ ಹೊಮ್ಮುವ ಊಹೆಯೋ, ಅಥವಾ ಊಹೆಯಿಂದ ಹೊಮ್ಮುವ ವಾಸ್ತವವಾದೀ ಪರಿಕಲ್ಪನೆಯೋ? ಇಂಥ ಜಿಜ್ಞಾಸೆಗೆ ಎಷರ್ ಚಿತ್ರಗಳು ನಮ್ಮನ್ನು ತಳ್ಳುತ್ತವೆ.
ಬಿಡಿಬಿಡಿ ಭಾಗಗಳು ವಾಸ್ತವವೆನ್ನಿಸಿ ಪೂರ್ಣ ಚಿತ್ರ ಅಸಹಜ ಎನ್ನಿಸುವ Relativity (ಸಾಪೇಕ್ಷತ್ವ, ಲಿಥೋಗ್ರಾಫ್, ೧೯೫೩) ಚಿತ್ರ ಗಮನಿಸಿ.


ಎಷರ್‌ಅವರ ಮತ್ತೊಂದು ಅದ್ಭುತ ಚಿತ್ರವೆಂದರೆ Hand with a Reflecting Globe(ಗೋಳಾಕಾರದ ದರ್ಪಣ ಹಿಡಿದ ಕೈ, ಲಿಥೋಗ್ರಾಫ್, ೧೯೩೫). ಇದು ಸ್ವಯಂ ಚಿತ್ರಣ. ಇಲ್ಲಿ ಎಷರ್‌ಅವರ ಕೈ - ಕೈಯಲ್ಲಿ ಗೋಲಾಕಾರದ ದರ್ಪಣ. ದರ್ಪಣದಲ್ಲಿ ಎಷರ್. ಚಿತ್ರ ಬರೆದವರೂ ಎಷರ್. ಇದನ್ನು ಒಂದು ರೀತಿಯಿಂದ Self Referential ಎಂದು ಕರೆಯಬಹುದು.
"ಈ ವಾಕ್ಯದಲ್ಲಿ ನಾಲ್ಕು ಪದಗಳಿವೆ" ಎಂಬ ವಾಕ್ಯದಂತೆ. ವಾಕ್ಯವೂ ಅದೇ, ವಸ್ತುವೂ ಅದೇ. ಎಷರ್ ಚಿತ್ರಗಳೂ ಇಂತಹ ಚಮತ್ಕಾರಿಕ ಚಕ್ರವ್ಯೂಹಗಳೊಳಕ್ಕೆ ನಮ್ಮನ್ನು ಆಹ್ವಾನಿಸುತ್ತವೆ.
ಮೇಲೆ ಉದಾಹರಿಸಿದ ಚಿತ್ರದ ಬಗ್ಗೆ ಆಲೋಚಿಸುವಾಗ ಬೊರೇಸ್‌ರ ಮತ್ತೊಂದು ಕಥೆ ಸಹಜವಾಗಿ ನೆನಪಿಗೆ ಬರುತ್ತದೆ. ಈ ಕಥೆಯೂ ಮೇಲಿನ ಚಿತ್ರದ ಪರಿಕಲ್ಪನೆಗೆ ಹತ್ತಿರವಾದದ್ದು. Borges and I ಎಂಬ ಕಿರುಗತೆಯ ಕನ್ನಡಾನುವಾದ ಇಲ್ಲಿದೆ: (ಅನುವಾದ - ಶ್ರೀ. ಎಸ್.ದಿವಾಕರ್ ಅವರದು)
ಏನಾದರೂ ಆಗುವುದು ನನಗಲ್ಲ. ಬೊರೇಸ್ ಎಂದು ಕರೆಯಲ್ಪಡುವ ಆ ಇನ್ನೊಬ್ಬನಿಗೆ. ನಾನು ಬ್ಯೂನಸ್ ಐರಿಸ್ ರಸ್ತೆಗಳಲ್ಲಿ ನಡೆದಾಡುತ್ತೇನೆ. ಪ್ರವೇಶದ್ವಾರ ಒಂದರ ಕಮಾನನ್ನು, ಗೇಟಿನ ಮೇಲಿರುವ ಕಬ್ಬಿಣದ ಸರಳುಗಳ ವಿನ್ಯಾಸವನ್ನು ನೋಡಲು ಒಂದು ಕ್ಷಣ, ಬಹುಶಃ ಯಾಂತ್ರಿಕವಾಗಿ ನಿಂತುಬಿಡುತ್ತೇನೆ. ಅಂಚೆಯಲ್ಲಿ ಬರುವ ಪತ್ರಗಳಿಂದ ನನಗೆ ಬೊರೇಸ್ ಗೊತ್ತು. ಪ್ರೊಫಸರರ ಒಂದು ಪೆಟ್ಟಿಗೆಯಲ್ಲಿ ಅಥವಾ ಜೀವನ ಚರಿತ್ರೆಯ ಒಂದ ಕೋಶದಲ್ಲಿ ನನಗೆ ಅವನ ಹೆಸರು ಕಾಣಸಿಗುತ್ತದೆ. ನನಗೆ "ಅವರ್ ಗ್ಲಾಸು"ಗಳು, ಭೂಪಠಗಳು, ಹದಿನೆಂಟನೆಯ ಶತಮಾನದ ಮುದ್ರಣ ಕಲೆ, ಕಾಫಿಯ ರುಚಿ ಮತ್ತು ಸ್ಟೀವನ್‌ಸನ್‌ನ ಗದ್ಯ ಎಂದರೆ ಇಷ್ಟ. ಅವನಿಗೂ ಇಷ್ಟವೇ. ಆದರೆ ಇವುಗಳನ್ನೆಲ್ಲ ಅವನು ಇಷ್ಟಪಡುವುದು ನಟನೊಬ್ಬ ತನ್ನ ಮೇಲೆ ಗುಣಾವಗುಣಗಳನ್ನು ಆರೋಪಿಸಿಕೊಂಡ ಹಾಗೆ. ನಮ್ಮದು ಹಗೆತನದ ಸಂಬಂಧ ಎಂದರೆ ಉತ್ಪ್ರೇಕ್ಷೆಯಾದೀತು; ನಾನು ಬದುಕುತ್ತೇನೆ, ಬದುಕಲು ನನ್ನನ್ನೇ ಗುರಿಪಡಿಸುತ್ತೇನೆ. ಇದರಿಂದ ಬೊರೇಸ್ ತನ್ನ ಸಾಹಿತ್ಯವನ್ನು ಕಲ್ಪಿಸುತ್ತಾನೆ. ಮತ್ತೆ ಅವನು ಕೆಲವು ಸಮರ್ಪಕ ಪುಟಗಳನ್ನು ಬರೆದಿದ್ದಾನೆಂದು ನಾನು ಒಪ್ಪಿಕೊಳ್ಳುವುದು ಕಷ್ಟವೇನಲ್ಲ. ಆದರೆ ಆ ಪುಟಗಳು ನನ್ನನ್ನು ಉಳಿಸಲಾರವು.

ನಮ್ಮಿಬ್ಬರಲ್ಲಿ ಯಾರು ಈ ಪುಟವನ್ನ ಬರೆದಿದ್ದಾರೋ ನನಗೆ ಗೊತ್ತಿಲ್ಲ.
ತನ್ನ ಬಗ್ಗೆಯೇ ಬರೆಯುತ್ತಾ ದೂರ ನಿಂತು Self Portrait ರಚಿಸುವ ಅದ್ಭುತ ಪರಿಕಲ್ಪನೆ ನಮಗೆ ಎಷರರ ಅನೇಕ ಚಿತ್ರಗಳಲ್ಲಿ ದೊರಕುತ್ತದೆ. ಎರಡು ಭಿನ್ನ ನೆಲೆಗಳಲ್ಲಿ ವಾಸ್ತವ-ಮಿಥ್ಯೆಯನ್ನು ಚಿತ್ರಿಸಿರುವ Butterflies, Day and Night, Puddleಚಿತ್ರಗಳು ಅದ್ಭುತ ಸೃಷ್ಟಿಗಳಾಗಿವೆ.



ಎಷರ್ ಚಿತ್ರಗಳ ಪರಿಚಯ ನನಗೆ ಆದದ್ದು ಹಾಫ್ಸ್ಟಾಡರ್ ಪುಸ್ತಕದಿಂದ. ಈ ಪುಸ್ತಕ ಕಲೆಯ ಬಗ್ಗೆ ಚರ್ಚೆ ಕೈಗೊಂಡಿಲ್ಲ. ಇದರಲ್ಲಿ ಗಣಿತಶಾಸ್ತ್ರ, ತತ್ವಶಾಸ್ತ್ರದ ದೃಷ್ಟಕೋನದಿಂದ - ನಿರಂತರತೆ, ಚಕ್ರವ್ಯೂಹಗಳು, ವಿರೋಧಾಭಾಸಗಳ ಚರ್ಚೆ ಇದೆ. ಎಷರ್ ಚಿತ್ರಗಳ ಜೊತೆಜೊತೆಗೇ ಜೆ.ಎಸ್.ಬಾಕ್ ಅವರ ಅದ್ಭುತ ಸಂಗೀತ ಸೃಷ್ಟಿ, ಹಾಗು ಕರ್ಟ್ ಗೊಡೆಲ್‌ರ ಗಣಿತಶಾಸ್ತ್ರದ ವೈಚಿತ್ರ್ಯಗಳನ್ನೂ ಚರ್ಚಿಸಲಾಗಿದೆ. ಇಲ್ಲಿ ಬೊರೇಸ್‌ರ ಕಥೆಗಳನ್ನೂ ಸೇರಿಸಬಹುದಿತ್ತು ಅನ್ನಿಸುತ್ತದೆ.
ಒಟ್ಟಾರೆ ಎಷರ್ ಚಿತ್ರಗಳ ಬಗ್ಗೆ ಒಂದು ಅಭಿಪ್ರಾಯ ಕೊಡಬೇಕು ಎನ್ನುವುದಾದರೆ, ಹಾಫ್ಸ್ಟಾಡರ್ ಪುಸ್ತಕ ಓದಿದ ಸಮಯದಲ್ಲಿ ನನಗಾದ ಅನುಭವವನ್ನು ಹಂಚಿಕೊಳ್ಳಬಹುದು. ಒಮ್ಮ ನಾನು ಗೆಳೆಯರೊಂದಿಗೆ (ಈ ಮೊದಲೇ ಹೇಳಿರುವ) ಎಪಿಮೆಂಡಿಸ್‌ನ ವಿರೋಧಾಭಾಸವನ್ನು ಚರ್ಚಿಸಲು ಪ್ರಯತ್ನಮಾಡಿದೆ. ಅದರೊಳಗಿನ ವರ್ತುಲತ್ವದ ಬಗ್ಗೆ ನಾನು ಮಾತನಾಡಲು ಯತ್ನಿಸಿದಾಗ "ಈ ಬಗ್ಗೆ ತಲೆಕೆಡಿಸಿಕೊಂಡು ಪ್ರಯೋಜನವೇನು? ಯಾವನೋ ಒಬ್ಬ ತಲೆತಿರುಕ ಚಮತ್ಕಾರದಿಂದ ಬಳಸಿರುವ ಪದಗಳು ಇವು. ಚರ್ಚಿಸಿ ಏನು ಪ್ರಯೋಜನ?" ಎಂಬ ಜವಾಬು ಬಂತು. ಅದೂ ನಿಜವೇ. ಸಾಹಿತ್ಯದಲ್ಲೂ ಹಲವು ಲೇಖಕರನ್ನು ನಾವು 'ಬೌದ್ಧಿಕ ಕಸರತ್ತು ಮಾಡುವವರು' ಎನ್ನುತ್ತೇವೆ. ತಳ್ಳಿಹಾಕುತ್ತೇವೆ. 'ಸಾಮಾಜಿಕ ಕಾಳಜಿ'ಯ ವಿಷಯ ಮಾತಾಡುತ್ತೇವೆ. ಈ ದೃಷ್ಟಿಯಿಂದ ಕಂಡಾಗ ಎಷರ್ ಅಂಥ ಕಲಾವಿದರು ಅಪ್ರಾಸಂಗಿಕವಾಗುತ್ತಾರೆ. ಏಕೆಂದರೆ ಅವರ ಕೃತಿಗಳಲ್ಲಿ 'ಸಾಮಾಜಿಕ ಕಾಳಜಿ' 'ಜೀವನ ಪ್ರೀತಿ' "Human Interest" ಇಲ್ಲ. 'ಹೃದಯ' ಇಲ್ಲ. ಹೀಗಾದರೂ ನಮ್ಮ ಬುದ್ಧಿಗೆ ಸ್ವಲ್ಪ ಕಸರತ್ತು ಕೊಡೋಣ ಎನ್ನಿಸಿದರೆ ಎಷರ್ ಚಿತ್ರಗಳು ಒಳ್ಳೆಯ ಗ್ರಾಸವನ್ನೊದಗಿಸುತ್ತವೆ.
ಗ್ರಂಥಋಣ:
1. Hofstadter, Douglas R: "Godel Escher and Bach: An Eternal Golden Braid", Vintage Books,

2. Hofstadter, Douglas R: "Metamagical Themas: Questing the Essence of Mind and Pattern", Bantam Books,
3. Fadiman,
No comments:
Post a Comment