Monday, March 2, 2009

ದಗಡೂ ಪರಬನ ತೂಫಾನ್ ಮೇಲ್

ಅಸಾವರಿ ಲೋಖಂಡೆರೂಪಕ್ ರಾಠೋಡ್ಪರೇಶ್ ಶಹಾಸತ್ಯಜಿತ್ ದತ್ತಾಬಲದೇವಮಧುಬನಿಮಧುವಂತಿಇಂದ್ರನೀಲ – ಈ ಇಂಥ ಹೆಸರಿನ ಪಾತ್ರಗಳಿರುವ ಕಥೆಗಳು ಯಾವ ಭಾಷೆಯಲ್ಲಿ ಬಂದಿರಬಹುದುಯಾವ ಊರಿನದ್ದಗಿರಬಹುದುಯಾವ ಬರಹಗಾರನದ್ದಾಗಿರಬಹುದುಜಯಂತ ಕಾಯ್ಕಿಣಿಯ ಬರಹಗಳನ್ನು ಹತ್ತಿರದಿಂದ ಬಲ್ಲವರಿಗೆ ಈ ಕ್ವಿಜ್ ಗೆ ಉತ್ತರ ಹೇಳುವುದು ಕಷ್ಟಾವಾಗಲಾರದುಮುಂಬಯಿಯನ್ನು ಒಂದು ವಿಭಿನ್ನ ರೀತಿಯಲ್ಲಿ ಜಯಂತ ಅಂತರ್ಗತ ಮಾಡಿಕೊಂಡಿದ್ದಾನೆಜಯಂತನ ರೀತಿ ಇತರ ನಮ್ಮೆಲ್ಲರಿಗಿಂತ ಬಹಳವೇ ಭಿನ್ನವಾದದ್ದುಮುಂಬಯಿನ ಮಹಾಸಾಗರಕ್ಕೆ ಬಂದು ಸೇರುವ ನದಿಗಳ ಮೂಲ ಹುಡುಕಹೊರಟರೆ ಎತ್ತೆತ್ತಲೋ ಹೋಗಿ ದಾರಿತಪ್ಪಬಹುದುಆದರೂ ಬರಹಗಾರರು ಸಾಮಾನ್ಯವಾಗಿ ನದಿ ಮೂಲ ಹುಡುಕಿ ಹೊರಡುವವರೇಹೀಗೆ ಯಾವಾಗಲೂ ಬೆನ್ನಹಿಂದೆ ತಿರುಗಿನೋಡುತ್ತಾ ನಡೆಯುವ ಬರಹಗಾರರ ನಡುವೆ ನದಿ ಮೂಲ ಹಿಡಿದು ಆಗಬೇಕಾದದ್ದು ಏನುಸಾಗರದ ಭವಿಷ್ಯದ ಬಗ್ಗೆ ಆಲೋಚಿಸೋಣ ಎನ್ನುತ್ತಾ ದಿಗಂತದತ್ತ ದೃಷ್ಟಿ ಬೀರುತ್ತಾ ನಿಂತ ಜಯಂತ ಕಾಯ್ಕಿಣಿ ಬೇರೆಯಾಗಿಯೇ ಕಾಣಿಸುತ್ತಾನೆ.

ಸಚಿನ್ ತೆಂಡೂಲ್ಕರನಂತೆಕಿರುವಯಸ್ಸಿಗೇ ರಂಗಕ್ಕಿಳಿದ ಜಯಂತನ ಬರಹಗಳ ಬಗ್ಗೆ ಗಹನ ಚರ್ಚೆಯಾಗದರುವುದಕ್ಕೆ ಸದಾ ಟೀನೇಜ್ ಕುತೂಹಲಗಳನ್ನುಉತ್ಸಾಹಗಳನ್ನು ಹೊತ್ತೊಯ್ಯುವ ಅವನ ವ್ಯಕ್ತಿತ್ವ ಕಾರಣವೇಸುಮಾರು ಮುವ್ವತ್ತು ವರ್ಷಗಳ ಹಿಂದೆ ಬರೆಯಲು ಪ್ರಾರಂಭಿಸಿದ ಜಯಂತನನ್ನು ಅವನ ಸಮಕಾಲೀನರೆಲ್ಲಾ ಪುಟ್ಟ "ಉದಯೋನ್ಮುಖಲೇಖಕನನ್ನಾಗಿ ಪರಿಗಣಿಸಿ ಬರೆದಿರುವ ಕೃತಿಗಳ ಚರ್ಚೆಗೆ ಬದಲುಬರಲಿರುವ ಕೃತಿಗಳ ಬಗ್ಗೆ ಆಸಕ್ತಿವಹಿಸುವುದರಲ್ಲೇ ನಿರತರಾಗಿಬಿಟ್ಟರುಶಾಂತಿನಾಥ ದೇಸಾಯಿ ಜಯಂತನನ್ನು "ಕನ್ನಡ ಸಾಹಿತ್ಯಕ್ಕೆ ಗೌರೀಶ ಕಾಯ್ಕಿಣಿಯವರ ಅತಿ ದೊಡ್ಡ ಕೊಡುಗೆಅಂತ ಹೇಳಿ ಸುಮ್ಮನಾಗಿಬಿಟ್ಟಿದ್ದರುಹೀಗಾಗಿಒಂದೆರಡು ಪೀಳಿಗೆಯ ಬರಹಗಾರರು ಜಯಂತನ ಸಮಕಾಲೀನರಾಗುವ ಭಾಗ್ಯ ಪಡೆದದ್ದಲ್ಲದೇಮುಂದೆ ಹೋಗಿ ಜೀವಾವಧಿ ಸಾಹಿತ್ಯ ಸೇವೆಗಾಗಿ ಅಕಾದಮಿಯ ಮನ್ನಣೆಯನ್ನ ಪಡೆದುಬಿಟ್ಟರೂಜಯಂತ ಮಾತ್ರ ತಾನು ಬರಹ ಪ್ರಾರಂಭಿಸದ ದಶಕದ ನಂತರ ಬರೆಯಲು ಪ್ರಾರಂಭಸಿದ ವಿವೇಕ ಶಾನಭಾಗಕೇಶವ ಮಳಗಿಅಶೋಕ ಹೆಗಡೆ ಎಲ್ಲರಿಗೂ ಸಮಕಾಲೀನನಾಗಿ ದೇವ್ ಆನಂದನಂತೆ ಎವರ್ ಗ್ರೀನ್ ಹೀರೋ ಆಗಿ ನಿಂತುಬಿಟ್ಟಿದ್ದಾನೆಜಯಂತನಿಗೆ ಈಗೀಗಷ್ಟೇ "ಸೀನಿಯರ್ ಬರಹಗಾರ"ನ ಮರ್ಯಾದೆ ಸಲ್ಲುತ್ತಿದೆ.. ಜಯಂತನ ಕಥೆಗಳನ್ನು ಓದಿಚಪ್ಪರಿಸಿಹೀಗೆ ನಮಗೂ ಬರೆಯಲು ಸಾಧ್ಯವಾಗಿದ್ದರೆ... ಎಂದು ಅಸೂಯೆಯಿಂದ ಮೆಚ್ಚಿ ಬೆಳೆದ ನಮ್ಮ ತಲೆಮಾರಿಗೆ (ಈ ವ್ಯತ್ಯಾಸ ವಯಸ್ಸಿನದ್ದಲ್ಲಬದಲಿಗೆ ಸೀರಿಯಸ್ ಬರವಣಿಗೆ ಪ್ರಾರಂಭಿಸಿದ ಸಮಯಕ್ಕೆ ಸಂಬಂದ ಪಟ್ಟಿದ್ದುಜಯಂತ ಒಂದು ಗುಣಮಟ್ಟದ ಪ್ರತೀಕವಾಗಿ (ಬಟ್ಟೆ ತೊಟ್ಟಗೊಮ್ಮಟನ ಹಾಗೆ ಸ್ಥಿರವಾಗಿ ನಿಂತುಬಿಟ್ಟಿದ್ದಾನೆ.ಬಹುಶಃ ಯಾವ ತಲೆಮಾರಿನ ಜೊತೆಗೂ ಪೈಪೋಟಿಯಿಲ್ಲದೆಯೇ ಲೇಖಕರ ದೊಂಬಿಯಲ್ಲಿ ಒಂಟಿಯಾಗಿ ನಿಂತುಎಡಬಿಡದೆ ಶಿಸ್ತಿನಿಂದ ಪ್ರತಿ ದೀಪಾವಳಿಯುಗಾದಿಗೆ ತನ್ನದೇ ಛಾಪಿನ ಕಥೆಗಳನ್ನು ಬರೆಯುತ್ತಲೇ ಮುಂದುವರೆದ ಕಾರಣಕ್ಕಾಗಿಯೇನೋ,ಜಯಂತ ಯಾವ ದ್ವೇಷಾಸೂಯೆಗಳಿಲ್ಲದೇಬಹುಜನ ಹಿತಾಯ ಬಹುಜನ ಸುಖಾಯ ಆಗಿ ಇದ್ದುಬಿಟ್ಟಿದ್ದಾನೆ.


ಜಯಂತನ ಇತ್ತೀಚಿನ ಪುಸ್ತಕ ತೂಫಾನ್ ಮೇಲ್ ಮುದ್ರಣಗೊಂಡ ಏಳು ತಿಂಗಳಿಗೇ ಮಾರಾಟವಾಗಿ ಮರುಮುದ್ರಣಕ್ಕೆ ಹೋಗುತ್ತಿದೆಯಂತೆಈ ಭಾಗ್ಯ ಕನ್ನಡದಲ್ಲಿ ಹೆಚ್ಚು ಲೇಖಕರಿಗೆ ಸಲ್ಲುವುದಿಲ್ಲಒಂದು ಕಡೆ ಪತ್ರಿಕೆಗಳನ್ನು ಕೊಂಡು ಓದುವ ಟೈಂಪಾಸ್ ಓದುಗರಿಗೂಸೀರಿಯಸ್ಸಾಗಿ ಸಾಹಿತ್ಯವನ್ನ ಓದುವ ಘನ ಓದುಗರಿಗೂ ಪ್ರಿಯವಾಗುವಂತೆ ಬರೆಯುವುದು ಸುಲಭವಾದ ವಿಷಯವಲ್ಲಆದರೂ ಜಯಂತ ಅದನ್ನು ಸರಳವಾಗಿ ಸಾಧಿಸಿಬಿಡುತ್ತಾನೆಇದಕ್ಕೆ ಎರಡು ಮಗ್ಗುಲುಗಳಿಂದ ಒಂದೇ ಕಾರಣವನ್ನು ಹುಡುಕಬಹುದು ಯಾವುದೇ ಪೀಳಿಗೆಗೆ ಸಲ್ಲದ ಬರಹಗಾರನಾದ್ದರಿಂದ ಆ ಪೀಳಿಗೆಗಿದ್ದ ಖಯಾಲುಗಳಾದ ನವ್ಯನವ್ಯೋತ್ತರ,ದಲಿತಬಂಡಾಯಬಂಡಾಯೋತ್ತರ ಸಾಹಿತ್ಯದ ಕಟ್ಟುಪಾಡುಗಳ ಹೊರೆ ಜಯಂತನಿಗಿರಲ್ಲಿಲ್ಲಅದೇ ಸಮಯಕ್ಕೆ ವಿಮರ್ಶಕರೂ ಆ ಹೊರೆಯನ್ನು ಅವನ ಮೇಲೆ ಹೊರೆಸಲಿಲ್ಲಹೀಗಾಗಿಕಡಿವಾಣ ಕಡಿದ ಅಶ್ವಮೇಧದ ಕುದುರೆಯಂತೆ ನಮ್ಮ ದಗಡೂ ಪ್ರಪಂಚವನ್ನ ತನ್ನದಾಗಿಸಿಕೊಳ್ಳುತ್ತ ಮುಂದುವರೆದುಬಿಟ್ಟಇದೇ ಅವನ ಸಾಧನೆಯೂ ಮಿತಿಯೂ ಆಯಿತೆನ್ನಿಸುತ್ತದೆಈ ಮಾತುಗಳನ್ನ ನಾನು ಸ್ವಲ್ಪ ತಡವಾಗಿ ತೂಫಾನ್ ಮೇಲ್ ನಲ್ಲಿ ಪ್ರಯಾಣ ಮಾಡಿ ಹೇಳುತ್ತಿದ್ದೇನೆ.


ಜಯಂತನ ಕಥೆಗಳಲ್ಲಿ ಇರುವ ಎಲ್ಲ ಅಂಶಗಳೂ ಈ ಪುಸ್ತಕದಲ್ಲಿದೆಯಾರಿಗೂ ದಕ್ಕದ ಮುಂಬಯಿನ ಒಂದು ವರ್ಗದ ಜನರ ಅತಿ ಸಣ್ಣ ಆತ್ಮೀಯ ವಿವರಗಳು ಇಲ್ಲಿವೆರಿಮಾಂಡ್ ಹೋಮಿನಲ್ಲಿ ಬೆಳೆದ ಅನಾಥೆ ಅಸಾವರಿಗೆ ಲೋಖಂಡೆ ಎಂಬ ಮನೆ ಹೆಸರು ಬಂದ ರೀತಿಪುಟ್ಟ ಹುಡುಗನೊಬ್ಬನ "ಕಡಪಾಮೆ ಮೇರಾ ಬಾಪ್ ಹೈಎನ್ನುವ ಅಮಾಯಕ ಉದ್ಧಟತನಒಂದು ಥರ್ಮಾಸ್ ನ ಚರಿತ್ರೆ ಹುಡುಕಿ ಹೊರಟ ಇಂದ್ರನೀಲನ ತನ್ಮಯತೆಈ ಇಂಥ ವಿವರಗಳನ್ನು ಜಯಂತ ಅದ್ಭುತವಾಗಿ ಅಕ್ಷರಕ್ಕಿಳಿಸುತ್ತಾನೆಖಾಸಗೀ ಕ್ಷಣಗಳ ಖಾಸಗೀ ನಾಚಿಕೆಗಳಿಗೂ,ವೃತ್ತಿಯ ನಿಮಿತ್ತ ವನ್-ಟೂ-ಥ್ರೀ-ಫೋರ್ ಲೆಕ್ಕಕ್ಕೆ ಛಾತಿ ಆಡಿಸಿ ಕುಂಡೆ ಕುಲಿಕಿಸುವ ಮಧುವಂತಿಯ ಇಬ್ಬಂದಿಯನ್ನು ಅರ್ಥಮಾಡಿಕೊಳ್ಳದ ಬಲದೇವನಿಜಜೀವನದಲ್ಲಿ ತೂಫಾನ್ ಮೇಲ್ ನಿಂದ ಧುಮುಕಿ ತನ್ನ ಸಂಸಾರವನ್ನು ಭೇಟಿಯಾಗುತ್ತಿದ್ದ ಗುಪ್ತ ವ್ಯಕ್ತಿಯ ಮಗ ಇಂಥ ಸ್ಟಂಟುಗಳನ್ನೇ ತನ್ನ ಜೀವನದ ಉಪಾದಿಯನ್ನಾಗಿ ಮಾಡಿಕೊಂಡಿರುವ ಚೋದ್ಯ ಈ ಎಲ್ಲವೂ ಜಯಂತನ ಜಗತ್ತಿನ ಛಾಪುಗಳನ್ನು ಬಿಡುತ್ತವೆರೈಲುಪ್ಲಾಟ್ ಫಾರ್ಮ್ಆಸ್ಪತ್ರೆಸಿನೆಮಾ ಹಾಲಿನ ಕತ್ತಲುಓಡಿಹೋಗುವ ಪ್ರೇಮಿಗಳು,ಸಮುದ್ರಬಸ್ಸುಗಳುಟ್ರಕ್ಕುಗಳು ಅದರ ಚಾಲಕರುಮನೆಯಿಲ್ಲದ ಪುಟ್ಟ ಹುಡುಗರುರಿಮಾಂಡ್ ಹೋಮುಜನಾರಣ್ಯದಲ್ಲಿ ಒಬ್ಬೊಂಟಿಯಾಗಿ ಜೀವನ ನಡೆಸುವ ನತದೃಷ್ಟರು ಅವನ ಜಗತ್ತಿನಲ್ಲಿ ಭರಪೂರ ಇದ್ದಾರೆಹೀಗಾಗಿಯೇ ನಮಗೆ ತೂಫಾನ್ ನಲ್ಲಿ ಮಿಥುನ್ ನಂಬರ್ ಟೂ ಕಾಣಿಸುತ್ತಾನೆನೋ ಪ್ರೆಸೆಂಟ್ಸ್ ಪ್ಲೀಸ್ ನಲ್ಲಿ ಮಧ್ಯಂತರ ಕಥೆ ಇಣುಕಿ ಹಾಕುತ್ತದೆತೆರೆದಷ್ಟೇ ಬಾಗಿಲುಪುಸ್ತಕದಿಂದ ತೂಫಾನ್ ಮೇಲ್ ವರೆಗೆ ಅವನ ಕೃತಿಗಳನ್ನು ಓದಿದಾಗ ನಮಗೆ ಮಿಕ್ಕ ಬರಹಗಾರರಲ್ಲಿ ಕಾಣುವಂತೆ ಭಿನ್ನ ಘಟ್ಟಗಳು ಕಾಣುವುದಿಲ್ಲಜಯಂತನ ಕಥೆಗಳುಕವಿತೆಗಳುಪ್ರಬಂಧಗಳು ನಿರಂತರವಾದ ಒಂದು ಯಾನದ ಚಿತ್ರದಂತೆ ಕಾಣುತ್ತದೆಬಹುಶಃ ಅದಕ್ಕೇ ಜಯಂತನ ಕಥೆಗಳುಕಥೆಗಳಿಗಿಂತ ಹೆಚ್ಚಾಗಿ ಪದಗಳ ಮೂಲಕ ಚಲಿಸುವ ಚಿತ್ರಗಳಾಗಿವೆಚಲಿಸುವ ಚಿತ್ರಗಳನ್ನು ಒಂದು ಯಾನದಂತೆಯೇ ಪರಗಣಿಸಬೇಕು.. ಅಲ್ಲಿ ಫ್ಲಾಷ್ ಬ್ಯಾಕ್ ಗೆ ಆಸ್ಪದವಿಲ್ಲಫಾಸ್ಟ್ ಫಾರ್ವರ್ಡ್ ಗೆ ಆಸ್ಕಾರವಿಲ್ಲಅದರ ಜೊತೆಗಿರುವುದೇ ಒಂದು ಪ್ರತ್ಯೇಕ ಅನಭವಅಷ್ಟೇ.


ಮುಂಬಯಿಯಲ್ಲಿ ತಮ್ಮ ಜೀವನದ ಬಹಳಷ್ಟು ಕಾಲ ಕಳೆದ ಜಯಂತ ಮತ್ತು ಚಿತ್ತಾಲಇವರಿಬ್ಬರ ಬರವಣಿಗೆಯಲ್ಲಿ ಎಷ್ಟು ವ್ಯತ್ಯಾಸವಿದೆ ಎನ್ನುವುದನ್ನ ಗಮನಿಸಲು ಒಂದೇ ಪುಟ್ಟ ಉದಾಹರಣೆ ಕೊಡಬಹುದುಜಯಂತನ ಕಥೆಗಳಲ್ಲಿ ಮುಂಬಯಿಗೇ ಖಾಸ್ ಆಗಿರುವ ಲೋಕಲ್ ರೈಲಿನ ಭಿತ್ತಿ ಎಷ್ಟು ಸಹಜವಾಗಿ ಬರುತ್ತದೆಅದೇ ಚಿತ್ತಾಲರ ಬರವಣಿಗೆಯಲ್ಲಿ ಮೊದಮೊದಲು ಬಂದ ಟ್ರಾಮ್ ಬಿಟ್ಟರೆಲೋಕಲ್ ರೈಲಿನ ಚಿತ್ರ ಬಹುಶಃ ಇಲ್ಲವೇ ಇಲ್ಲವೇನೋಚಿತ್ತಾಲರ ಕಥೆಗಳೆಲ್ಲವೂ ಹನೇಹಳ್ಳಿಯ ಮೂಲದಿಂದ ಬಂದು ಮುಂಬಯಿಯಲ್ಲಿ ವಸತಿ ಮಾಡುತ್ತಾ ಹನೇಹಳ್ಳಿಯ ಮೂಲವನ್ನು ಮತ್ತೆ ಪಡೆಯಲುಅನುಭವಿಸಲುಆಲೋಚಿಸಲು ಉತ್ಸಾಹ ತೋರಿದರೆಜಯಂತನ ಕಥೆಗಳಲ್ಲಿ ಗೋಕರ್ಣ ಕೇವಲ ಮತ್ತೊಂದು ಊರಾಗಿ ಬರುತ್ತದೆಗೋಕರ್ಣ ಒಂದು ಮೂಲವೂ ಅಲ್ಲ,ಒಂದು ಲಕ್ಷ್ಯವೂ ಅಲ್ಲ.


ಜಯಂತನ ಕಥೆಗಳು ಮುಂಬಯಿಯಂತೆಮುಂಬಯಿನ ಲೋಕಲ್ ರೈಲಿನಂತೆಮುಂಬಯಿನ ಜೀವನದಂತೆ... ಮಿಕ್ಕ ನಗರಗಳಿಗೆ ಹೋಲಿಸಿದರೆ ಮುಂಬಯಿ ಹೆಚ್ಚು ಉದ್ದ ಕಡಿಮೆ ಅಗಲವಿರುವ ನಗರಅದಕ್ಕಾಗಿಯೇ ಅಲ್ಲಿ ಸುಲಭವಾಗಿ ಲೋಕಲ್ ರೈಲುಗಳನ್ನು ಓಡಿಸಲು ಸಾಧ್ಯವಾಯಿತುಲೋಕಲ್ ರೈಲು ತನ್ನ ಟೈಂಟೇಬಲಿನ ಪ್ರಕಾರಸಿಗ್ನಲ್ ದೊರತ ಕೂಡಲೇ ಹೊರಟುಬಿಡುತ್ತದೆಅದರ ಪಯಣದಲ್ಲಿ ಒಂದು ಶಿಸ್ತಿದೆಒಂದು ಲಕ್ಷ್ಯವಿದೆತಾನು ಎಲ್ಲಿಂದಬಂದೆಏತಕ್ಕಾಗಿ ಎಂದು ಯೋಚಿಸುವ ಕುತೂಹಲವಾಗಲೀ,ಸಮಯವಾಗಲೀ ರೈಲಿಗೆ ಇಲ್ಲಅದರ ದೃಷ್ಟಿಯೆಲ್ಲಾ ಗಮ್ಯದತ್ತಗಮ್ಯಸೇರಿದ ನಂತರ ಅದು ಬಂದಲ್ಲಿಗೇ ವಾಪಸ್ಸಾದರೂಅದು ಮೂಲ ಹುಡುಕಿ ಹೊರಟ ಪ್ರಯಾಣವಲ್ಲ ಅದು ಹೊಸದೇ ಒಂದು ಗಮ್ಯದತ್ತ ಯಾನಮೊದಲು ಮೂಲವಾಗಿದ್ದ ಜಾಗವೇ ಈಗ ಗಮ್ಯವಾಗಿರಬಹುದುಅದು ಮುಖ್ಯವಲ್ಲಜಯಂತ ನಮ್ಮೆಲ್ಲರಿಗಿಂತ ಭಿನ್ನವಾಗಿರುವುದು ತನ್ನ "ಈಗ ಹೀಗೆಮುಂದೆಯೂ ಹೀಗೆಯೇ ಇರುವುದನ್ನ ಸಂಭ್ರಮದಿಂದ ಆನಂದಿಸೋಣಎಂಬ ನಿಲುವಿನಿಂದಾಗಿಸಂತೃಪ್ತ ಜಯಂತನ ಪಾತ್ರಗಳೂ ಸಂತೃಪ್ತರಾಗಿ ಆತ್ಮೀಯರಾಗಿ ಭಿತ್ತಿ ಚಿತ್ರಗಳಾಗಿ ನಿಂತುಬಿಡುತ್ತಾರೆಜಯಂತ ಮೂಲತಃ ಒಬ್ಬ ಛಾಯಾಚಿತ್ರಗ್ರಾಹಕ.ಅದೃಷ್ಟವಶಾತ್ ಅವನ ಕೈಯಲ್ಲಿ ಕ್ಯಾಮರಾಗೆ ಬದಲು ಲೇಖನಿ ಇದ್ದುಬಿಟ್ಟಿದೆಆ ಲೇಖನಿಯಿಂದ ಹೊಮ್ಮುವ ಚಿತ್ರಗಳು ಕ್ಯಾಮರಾದ ಚಿತ್ರಗಳಿಗಿಂತ ಸಫಲವಾಗಿವೆ....

No comments:

Post a Comment